25th June 2025
ಲಕ್ಷ್ಮೇಶ್ವರ: ಪಟ್ಟಣದ ತಾಲೂಕ ಆಡಳಿತ ಮತ್ತು ಪೊಲೀಸ್ ಠಾಣಾ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ ನಿಮಿತ್ಯ ಬೈಕ್ ರ್ಯಾಲಿ ಮೂಲಕ ಜನಜಾಗೃತಿ ಜಾಥಾ ನಡೆಸಿದರು.
ಇಂದಿನ ಯುವಕರು ತಮ್ಮ ಅತ್ಯಮೂಲ್ಯವಾದ ಜೀವನವನ್ನು ದುಶ್ಚಟಗಳಿದ್ದ ದೂರವಿದ್ದು ಉತ್ತಮ ಆರೋಗ್ಯ ಬದುಕಬೇಕಾಗಿದೆ. ದೈಹಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗದೆ ದುಷ್ಟ ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಹೊಂದಬೇಕು. ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಒಳಗಾಗಿ ಜೀವನವನ್ನು ಹಾಳು ಮಾಡಿಕೊಳ್ಳದೆ ತಮಷ್ಟಕ್ಕೆ ತಾವೇ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳಬೇಕು ಇಂತಹ ಕೆಟ್ಟ ಪರಿಣಾಮಗಳಿಂದ ದೂರವಿದ್ದು ಉತ್ತಮ ಆರೋಗ್ಯ ಹೊಂದಬೇಕು ಎಂದು ತಹಸೀಲ್ದಾರ್ ವಾಸುದೇವಸ್ವಾಮಿ ಹೇಳಿದರು.
ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಾಣಿಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಬಲಿಯಾಗದೆ. ಮನುಕುಲದ ಮೇಲೆ ಕೆಟ್ಟ ಪರಿಣಾಮ ಬೀರುವ ಮಾದಕ ವಸ್ತುಗಳ ಮೊಹಕ್ಕೆ ಸಿಲುಕಬಾರದು. ಇಂತಹ ಸಮಾಜಕ್ಕೆ ಮಾರಕವಾಗುವ ದುಷ್ಪರಿಣಾಮಗಳ ಕುರಿತು ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ 1987 ಡಿಸೆಂಬರ್ 7ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 26ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನುಬಾಹಿರ ಸಾಗಾಟ ವಿರೋಧಿ ದಿನ ವನ್ನಾಗಿ ಆಚರಿಸಲಾಗುತ್ತಿದೆ ಎಂದು ಸಿಪಿಐ ನಾಗರಾಜ್ ಮಾಡಳ್ಳಿ ಹೇಳಿದರು.
ಮಾದಕ ವಸ್ತುಗಳ ಸಾಗಾಣಿಕೆ ಕಾನೂನುಬಾಹಿರ ಎಂದು ಗೊತ್ತಿದ್ದರೂ ಕೂಡ ಇಂತಹ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆಯಿಂದ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಯುವಕರ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಗುಟುಕಾ, ಸಿಗರೇಟ್, ಗಾಂಜಾ, ಅಪಿಮು ಮತ್ತು ಮಧ್ಯ ಸೇವನೆ ಮುಂತಾದ ದುಶ್ಚಟಗಳಿಂದ ದೂರವಿರಬೇಕು. ಇಂತಹ ಸಮಾಜ ಮಾರಕ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕು. ಕಾನೂನಿನ ಹೊರತಾಗಿ ಪ್ರತಿಯೊಬ್ಬ ನಾಗರಿಕನು ಈ ಕುರಿತಾಗಿ ಜಾಗೃತಿ ಹೊಂದಿರಬೇಕು. ಮಾದಕ ವಸ್ತುಗಳಿಂದ ಮುಕ್ತವಾಗಿ ಸಮಾಜದಲ್ಲಿ ಜವಾಬ್ದಾರಿಯುತ್ತಾ ವ್ಯಕ್ತಿಯಾಗಿ ಸಮಾಜ ಹಾಳು ಮಾಡುವ ದುಷ್ಪರಿಣಾಮಕಾರಿ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿರಬೇಕೆಂದು ಪಿಎಸ್ಐ ನಾಗರಾಜ್ ಗಡಾದ್ ಹೇಳಿದರು.
ಈ ಸಂದರ್ಭದಲ್ಲಿ ಬೈಕ್ ರ್ಯಾಲಿ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ ಸಂಚರಿಸುವ ಮೂಲಕ ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ ನಿಮಿತ್ಯ ಜನಜಾಗೃತಿ ಮೂಡಿಸಲಾಯಿತು. ತಾಲೂಕ್ ಪಂಚಾಯತಿ ಇಓ ಕೃಷ್ಣಪ್ಪ ಧರ್ಮಾರ, ಪುರಸಭೆ ಮುಖ್ಯ ಅಧಿಕಾರಿ ಮಹೇಶ್ ಹಡಪದ್, ಕ್ರೈಂ ಪಿಎಸ್ಐ ಟಿ ಕೆ ರಾತೋಡ್, ಎನ್ ಎ ಮೌಲ್ವಿ, ವೈ ಸಿ ದೊಡ್ಡಮನಿ, ಮಕನದಾರ್, ಮಾರುತಿ ಲಮಾಣಿ, ಬಳ್ಳಾರಿ, ನದಾಫ, ಕಲ್ಲನವರ್ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಬಹು ಮುಖ್ಯ-ಪ್ರಾದೇಶಿಕ ನಿರ್ದೇಶಕ ಜೆ ಚಂದ್ರಶೇಖರ ಅಭಿಮತ